ಯಾವುದನ್ನು ಆಯಲಿ

ಯಾವುದನ್ನು ಆಯಲಿ

ಗೊಂದಲದ ಗೊಡಾಗಿದೆ ಮನ
ಯಾವುದನ್ನು ಆಯಲೆಮದು,
ಉತ್ತರ ತಿಳಿಸುವೆಯ ಮನವೆ ಯಾವುದು ಸರಿಯೆಂದು.
ತುತ್ತು ಕೊಟ್ಟ ಅಮ್ಮನ ಮಾತನ್ನಾಯಲೋ,
ಭರವಸೆ ಕೊಟ್ಟ ಅಪ್ಪನ ಮಾತನ್ನಾಯಲೋ,
ಕಾಳಜಿ ಕೊಟ್ಟ ಬಂಧುಗಳ ಮಾತನ್ನಾಯಲೋ,
ನಂಬಿಕೆ ಕೊಟ್ಟ ಪ್ರೀತಿಯ ಮಾತನ್ನಾಯಲೋ,
ಬಲ ಕೊಟ್ಟ ಸ್ನೇಹಿತನ ಮಾತನ್ನಾಯಲೋ,
ಬುದ್ಧಿ ಕೊಟ್ಟ ಗುರುವಿನ ಮಾತನ್ನಾಯಲೋ,
ಇದಾವುದು ಬೇಡವೆಂದು ಬದುಕು ಕೊಟ್ಟ
ದೇವರ ಮಾತನ್ನಾಯಲೋ,
ಹಲವು ಆಯ್ಕೆಗಳ ನಡುವೆ
ಹಲವು ಕವಲುಗಳ ನಡುವೆ
ಇಬ್ಬಂದಿಯಂತಾಗಿದೆ ಮನ
ಯಾವುದು ಮೊದಲೊ ಯಾವುದು ಕೊನೆಯೊ
ಭ್ರಾಂತ ಸ್ಥಿತಿಯನ್ನಾದಿದೆ ಮನ
ಇದೇ ನನ್ನ ಆಯ್ಕೆಯೆಂದು.

Comments

Post a Comment

Popular posts from this blog

ಅನುಕೂಲಕ್ಕೊಂದೆರಡು ಪ್ರೀತಿ..!-2

ಪ್ರತ್ಯಕ್ತೆ...

Love at first sight...