Posts

Showing posts from April 10, 2016

Love at first sight...

Image
ಕಣ್ಣುಗಳು ಹೇಳ್ತಾವಂತೆ ಅದು ಪ್ರೇಮಾನಾ? ವಾಂಛೆನಾ? ಲವ್ ಎಟ್ ಫಸ್ಟ್‍ಸೈಟ್ :-  ನಿಜಾನಾ? ಸುಳ್ಳೋ ಪ್ರೀತಿ ಇರೋದೆಲ್ಲಿ? ಹೃದಯದಲ್ಲಾ? ಮನಸ್ಸಿನಲ್ಲಾ? ಅಷ್ಟು ಸುಳಭವಾಗಿ ಉತ್ತರಿಸಲಾಗದ ಪ್ರಶ್ನೆ ಇದು? ಆದರೆ, ಒಂದು ಮಾತು ನಿಜ..... ಪ್ರೀತಿ ಕಣ್ಣಲ್ಲಿದೆ!! ಹಾಗಿದ್ರೆ ಮೊದಲ ನೋಟದ ಪ್ರೀತಿ ಅನ್ನೋ ನಂಬಿಕೆ ನಿಜಾನಾ??? ನಮ್ಮದು ಲವ್ ಎಟ್ ಫಸ್ಟ್‍ಸೈಟ್, ಮೊದಲ ನೋಟಕ್ಕು ಪ್ರೇಮ ಶುರುವಾಯಿತು ಹೀಗಂತ ತುಂಬ ಜನ ಹೇಳುವುದನ್ನು ಕೇಳಿದ್ದೇವೆ. ಇದು ಬರಿ ಲವ್ ಮಾಡಿದವರ ವಿಷಯವಲ್ಲ. ಈ ಅರೇಂಜಡ್ ಮ್ಯಾರೇಜ್ ಆದೋರಿಗೂ ಕೂಡ ಇದು ಹೊರತಲ್ಲ. ಗಂಡು-ಹೆಣ್ಣು ನೋಡುವ ಶಾಸ್ತ್ರದಲ್ಲೇ ಮದುವೆ ನಿಷ್ಚಯವಾದ ಹಲವು ಪ್ರಸಂಗಳನ್ನು ನಾನು ಕೇಳಿದ್ದೇನೆ, ನೋಡಿದ್ದೇನೆ. ಆದರೆ ಬರೀ ನೋಟದಲ್ಲೇ ಹೇಗಪ್ಪಾ ಪ್ರೀತಿ ಹುಟ್ಟುತ್ತೆ? ಯಾರು ಏನು ಎತ್ತ ಎಂಬ ಯಾವುದನ್ನು ಕೇಳದೆ ಹೇಳದೆ, ಒಂದು ಮಾತಿಲ್ಲದೆ ಪ್ರೀತಿ ಹುಟ್ಟೋದು ಸಾಧ್ಯಾನಾ? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಯಾರು ಏನು ಎತ್ತ ಎಂಬ ಯಾವುದನ್ನು ಕೇಳದೆ-ಹೇಳದೆ, ಒಂದು ಮಾತಿಲ್ಲದೆ ಪ್ರೀತಿ ಹುಟ್ಟೋದು ಸಾಧ್ಯಾನಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆದರೆ ವಿಜ್ಞಾನ ಹೇಳುತ್ತೆ ಲವ್ ಅಟ್ ಫಸ್ಟ್ ಸೈಟ್ ಅನ್ನೋದು ಬಹುತೇಕ ನಿಜ! ಎಲ್ಲರೂ ತಿಳಿದಿರುವ ಹಾಗೆ ಪ್ರೀತಿ ಅನ್ನೋ ಧ್ವಯರ್ಧಾಕ್ಷರಿ ಮಂತ್ರ ಅಪೂರ್ವ ಸಂಚಲನ ಒಂದನ್ನು ಹುಟ್ಟುಹಾಕಬಲ್ಲ ಕಂಪನ. ಅದು ಜಾತಿ-ಧರ್ಮ ವಯಸ್ಸು ಮತ್ತು ಕಾಲಾತೀತ. ಪ