Posts

Showing posts from January 3, 2016

ಸಿಂಪಲ್‌ ಅಮ್ಮ ಸೂಪರ್ ಮಗಳು

Image
ಸಿಂಪಲ್ ಅಮ್ಮ ಸೂಪರ್ ಮಗಳು   "ಅಮ್ಮ ಪ್ಲೀಸ್ ನೀನ್ ಹೇಳ್ದಾಗೆ ಇರಕ್ಕೆ ಆಗಲ್ಲ. ನಿನ್ ಟೇಸ್ಟ್ ತುಂಬ ಔಡೇಟೆಡ್ ಆಗಿದೆ, ಇದೆಲ್ಲ ಹಾಕಂಡೋದ್ರೆ ನನ್ ಫ್ರೆಂಡ್ಸ್ ಆಡ್ಕೋತಾರೆ, ನಿಂಗೆ ಏನು ಗೊತ್ತಾಗಲ್ಲ ಹೋಗು" ಇದು ಪ್ರತಿಯೊಬ್ಬರ ಮನೆಯಲ್ಲೂ ಕೇಳಿಬರುವ ಮಾತು, ನಾವೆಲ್ಲರು ನಮ್ಮ ಮನೆಯಲ್ಲಿ ಈ ತರಹದ ಮಾತುಗಳನ್ನು ಕೇಳಿಯೂ ಆಥವ ಆಡಿಯೂ ಇರುತ್ತೇವೆ. ಹೌದು ಒಂದು ವಯಸ್ಸಿಗೆ ಬಂದ ಮೇಲೆ ನಮ್ಮೆಲ್ಲರಿಗೂ ಅಮ್ಮ “ಔಡೆಟೆಡ್” ಅನಿಸುತ್ತೆ. ಆ ವಯಸ್ಸಿನಲ್ಲಿ ನಮ್ಮ ಬುದ್ಧಿಗೆ ತೋಚಿದ್ದನ್ನು ಮಾತ್ರ ನಾಲಿಗೆ ಆಡುತ್ತದೆ, ಮನಸ್ಸಿಗೆ ತೋಚಿದ್ದನ್ನಲ್ಲ. ಅಮ್ಮ ಮಾತ್ರ ಜಡೆ ಹಾಕಬೇಕು ಅನ್ನುತ್ತಿದ್ದ ನಾವು “ನೀನು ಗೌರಮ್ಮನ ರೀತಿ ತಲೆ ಬಾಚ್ತೀಯ ಎನ್ನುತ್ತೇವೆ. ಅಮ್ಮನ ಸೆಲೆಕ್ಷನ್ ಸೊಪರ್ ಅನ್ನಿಸುತ್ತಿದ್ದ ನಮಗೆ ಅಮ್ಮನ ಟೇಸ್ಟ್ ಚನ್ನಾಗಿಲ್ಲ ಅನ್ನಿಸುತ್ತೆ. ಶಾಪಿಂಗ್, ಸ್ಕೂಲ್‍ಡೇ, ಸಿನಿಮಾ ಗಳಿಗೆಲ್ಲ ಅಮ್ಮನೇ ಜೊತೆಗಿರಬೇಕೆನ್ನುತ್ತಿದ್ದ ನಾವು ಇವೆಲ್ಲ ಸುಳ್ಳೇ ಸುಳ್ಳು ಎನಿಸುವಷ್ಟು ಬದಲಾಗಿಬಿಡುತ್ತೇವೆ. ಅಮ್ಮ ನಮ್ಮ ಜೊತೆ ಹೊರಗೆ ಬಂದರೆ ಒಂಥರ ಮುಜುಗರ. ಅಮ್ಮನ ಮಾತು ಕೆಲಸಕ್ಕೆಬಾರದ್ದು, ಅವಳ ಇಷ್ಟ-ಕಷ್ಟಗಳು ತಲೆನೋವು, ಕೊನೆಗೆ ಎಲ್ಲದ್ದಕ್ಕೂ ಪ್ರಶ್ನೆ ಮಾಡುವ ಅಮ್ಮನನ್ನು ನಾವು ಅವೈಡ್ ಮಾಡಲಾರಂಬಿಸುತ್ತೇವೆ. ಹೇಳಿ-ಕೇಳಿ ಹದಿ ಹರೆಯದ ವಯಸ್ಸು. ನಮಸ್ಸಿಗೆ ಬರುವುದೆಲ್ಲವು ಎಡಬಿಡಂಗಿ ಹುಚ್ಚು ಯೋಚನೆಗಳೇ. ಚಿಕ್ಕಪುಟ್ಟದ್ದಕ್ಕೂ ಥ