Love at first sight...

ಕಣ್ಣುಗಳು ಹೇಳ್ತಾವಂತೆ ಅದು ಪ್ರೇಮಾನಾ? ವಾಂಛೆನಾ?

ಲವ್ ಎಟ್ ಫಸ್ಟ್‍ಸೈಟ್ :-  ನಿಜಾನಾ? ಸುಳ್ಳೋ


ಪ್ರೀತಿ ಇರೋದೆಲ್ಲಿ? ಹೃದಯದಲ್ಲಾ? ಮನಸ್ಸಿನಲ್ಲಾ? ಅಷ್ಟು ಸುಳಭವಾಗಿ ಉತ್ತರಿಸಲಾಗದ ಪ್ರಶ್ನೆ ಇದು? ಆದರೆ, ಒಂದು ಮಾತು ನಿಜ..... ಪ್ರೀತಿ ಕಣ್ಣಲ್ಲಿದೆ!!

ಹಾಗಿದ್ರೆ ಮೊದಲ ನೋಟದ ಪ್ರೀತಿ ಅನ್ನೋ ನಂಬಿಕೆ ನಿಜಾನಾ???


ನಮ್ಮದು ಲವ್ ಎಟ್ ಫಸ್ಟ್‍ಸೈಟ್, ಮೊದಲ ನೋಟಕ್ಕು ಪ್ರೇಮ ಶುರುವಾಯಿತು ಹೀಗಂತ ತುಂಬ ಜನ ಹೇಳುವುದನ್ನು ಕೇಳಿದ್ದೇವೆ. ಇದು ಬರಿ ಲವ್ ಮಾಡಿದವರ ವಿಷಯವಲ್ಲ. ಈ ಅರೇಂಜಡ್ ಮ್ಯಾರೇಜ್ ಆದೋರಿಗೂ ಕೂಡ ಇದು ಹೊರತಲ್ಲ. ಗಂಡು-ಹೆಣ್ಣು ನೋಡುವ ಶಾಸ್ತ್ರದಲ್ಲೇ ಮದುವೆ ನಿಷ್ಚಯವಾದ ಹಲವು ಪ್ರಸಂಗಳನ್ನು ನಾನು ಕೇಳಿದ್ದೇನೆ, ನೋಡಿದ್ದೇನೆ.
ಆದರೆ ಬರೀ ನೋಟದಲ್ಲೇ ಹೇಗಪ್ಪಾ ಪ್ರೀತಿ ಹುಟ್ಟುತ್ತೆ? ಯಾರು ಏನು ಎತ್ತ ಎಂಬ ಯಾವುದನ್ನು ಕೇಳದೆ ಹೇಳದೆ, ಒಂದು ಮಾತಿಲ್ಲದೆ ಪ್ರೀತಿ ಹುಟ್ಟೋದು ಸಾಧ್ಯಾನಾ? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಯಾರು ಏನು ಎತ್ತ ಎಂಬ ಯಾವುದನ್ನು ಕೇಳದೆ-ಹೇಳದೆ, ಒಂದು ಮಾತಿಲ್ಲದೆ ಪ್ರೀತಿ ಹುಟ್ಟೋದು ಸಾಧ್ಯಾನಾ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆದರೆ ವಿಜ್ಞಾನ ಹೇಳುತ್ತೆ ಲವ್ ಅಟ್ ಫಸ್ಟ್ ಸೈಟ್ ಅನ್ನೋದು ಬಹುತೇಕ ನಿಜ!

ಎಲ್ಲರೂ ತಿಳಿದಿರುವ ಹಾಗೆ ಪ್ರೀತಿ ಅನ್ನೋ ಧ್ವಯರ್ಧಾಕ್ಷರಿ ಮಂತ್ರ ಅಪೂರ್ವ ಸಂಚಲನ ಒಂದನ್ನು ಹುಟ್ಟುಹಾಕಬಲ್ಲ ಕಂಪನ. ಅದು ಜಾತಿ-ಧರ್ಮ ವಯಸ್ಸು ಮತ್ತು ಕಾಲಾತೀತ. ಪ್ರೀತಿ ಎನ್ನುವುದು ಕಟ್ಟುಪಾಡು, ವಾಂಛೆ, ಲೌಕಿಕತೆಗಳನ್ನು ಮೀರಿದ ಭಾವಲೋಕ, ಭಾವನೆಗಳ ಸುಪ್ತಸಾ ಸಾಂಗದ ತಂಗಾಳಿ. ಅದಕ್ಕೆ ಕಾಮದ ಗುಂಗಿಲ್ಲ, ದೈಹಿಕ ಚೆಲುವಿನ ಹಂಗೂ ಇಲ್ಲ ಹಾಗಾಗಿ ಅದು ಪವಿತ್ರ-ಪ್ರೀತಿ ಅಂದ್ರೆ ಕೇರಿಂಗ್, ಪ್ರೀತಿ ಅಂದ್ರೆ ಭರವಸೆ, ಪ್ರೀತಿ ಅಂದ್ರೆ ನಂಬಿಕೆ.

ಒಬ್ಬ ಹುಡುಗ ಒಬ್ಬ ಹುಡುಗೀನಾ ನೋಡ್ತಾ ಇದ್ದಾನೆ ಅಂದ ಮಾತ್ರಕ್ಕೆ ಅದು ಪ್ರೀತಿ ಅಗೋದಿಲ್ಲ. ನೋಡುತ್ತಿರುವ ದೃಷ್ಟಿ ಇಲ್ಲಿ ಮುಖ್ಯ. ದೃಷ್ಟಿಯಿಂದಲೇ ಅವನಿಗೆ ಅವಳ ಮೇಲಿರುವುದು ಪ್ರೀತಿಯಾ, ವಾಂಛೆಯಾ ಅನ್ನೋದು ಗೊತ್ತಾಗಿ ಬಿಡುತ್ತದೆ ಅಂತ ಹೇಳುತ್ತದೆ ವಿಜ್ಞಾನ. ಒಬ್ಬ ವ್ಯಕ್ತಿ ಒಬ್ಬಾಕೆಯ ಮುಖವನ್ನು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದರೆ ಅಲ್ಲೋಂದು ಪ್ರೇಮಲೋಕ ಸೃಷ್ಟಿಯಾಗುತ್ತದೆ ಎಂದೇ ಅರ್ಥ. ಅದು ಬಿಟ್ಟು ಆತ ಆಕೆಯ ಮುಖವನ್ನು ಬಿಟ್ಟು ದೇಹವನ್ನು ಅಳೆಯುತ್ತಿದ್ದಾನೆ ಎಂದರೆ ಅದು ನಂಬಲರ್ಹ ಪ್ರೀತಿಯಲ್ಲ, ಅಲ್ಲೊಂದು ವಾಂಛೆ ಹೆಡೆ ಎತ್ತಿದೆ ಎಂದೇ ಅರ್ಥ.
ಪ್ರೇಮಿಗಳು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾರೆ ಅನ್ನೋ ಮಾತಿಗೂ ಮೊದಲ ನೋಟದಲ್ಲೇ ಮುಖವನ್ನೇ ಏಕಾಗ್ರತೆಯಿಂದ ನೋಡಿದರೆ ಅದು ಪ್ರೀತಿ ಅನ್ನು ವಿಜ್ಞಾನದ ಲೆಕ್ಕಕ್ಕೂ ತುಂಬ ತಾಳೆಯಾಗುತ್ತದೆ. ಕದ್ದು ನೋಡುವ ಕಣ್ಣುಗಳು ಕೂಡಾ ಇನ್ನೊಂದು ಕಣ್ಣನ್ನು ಅರಸಿದರೆ ಅದು ಪ್ರೀತಿ. ಅಲ್ಲೋಂದು ತುಂಟತನ, ಹುಡುಕಾಟವಿದ್ದರೆ ಅದು ಪ್ರೀತಿ. ಅದೇ ದೇಹವನ್ನು ಅರಸುತ್ತಿದ್ದರೆ ಅದು ವಾಂಛೆ.


ವ್ಯಕ್ತಿಯೊಬ್ಬನ ನೋಟ ಅವರ ಮನಸ್ಸಿನ ಭಾವನೆಗಳನ್ನು ತೋರಿಸುತ್ತದೆ. ಎನ್ನುವ ನಿಟ್ಟಿನಲ್ಲಿ ಹೊಸ ಸಂಶೋಧನೆ ನಡೆಸಿದ್ದು ಚಿಕಾಗೋದ ಸಂಶೋಧಕರು. ಪಶ್ಚಿಮದಲ್ಲಿ ಹಿಂದೊಮ್ಮೆ ಮಾತಿತ್ತು. ಒಬ್ಬ ವ್ಯಕ್ತಿ ಪ್ರೀತಿಸುತ್ತಿದ್ದಾನೆಯೇ ಎನ್ನುವುದು ಆತ ಕೊಡುವ ಚುಂಬನದಿಂದಲೇ ಗೊತ್ತಾಗುತ್ತದೆ ಅಂತ. ಈಗ ಚಿಕಾಗೋದ ಸಂಶೋಧಕರು ಕಣ್ಣಿನ ನೋಟದಲ್ಲೇ ಅಳೆದುಬಿಡುತ್ತಾರೆ ಮತ್ತು ಮೊದಲ ನೋಟದ ಅರೆ ಸೆಕೆಂಡಿನಲ್ಲಿ ಇದು ನಿರ್ಧಾರವಾಗಿ ಬಿಡುತ್ತದೆಯಂತೆ.
ಇಬ್ಬರು ಅಪರಿಚಿತರ ನಡುವೆ ಮೊದಲ ನೋಟದ ಪ್ರೀತಿಯ ಬಗ್ಗೆ ನಿಖರವಾಗಿ ಹೇಳಲು ಅಸಾಧ್ಯವಾದರೂ ಅವರಿಬ್ಬರು ಮೊದಲ ನೋಟದಲ್ಲಿ ಪರಸ್ಪರ ಸಂವಹನ ಮಾಡಿಕೊಂಡ ಭಾವ ಮಾತ್ರ ಖಂಡಿತವಾಗಿ ಸ್ಪಷ್ಟ ಎನ್ನುತ್ತಾರೆ. ಸ್ಟೆಫಾನಿ ಕಾಕಿಯೋಷ್ಟೋ ಅವರು ಮತ್ತು ಜಿನೇವಾ ವಿಶ್ವವಿದ್ಯಾನಿಲಯದ ಮನಶಾಸ್ತ್ರ ಮತ್ತು ಮನೋವಿಜ್ಞಾನ ವಿಭಾಗದ ಸಹೋದ್ಯೋಗಿಗಳು ಪ್ರಕಟಿಸಿರುವ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಹಿಂದಿನ ಸಂಶೋಧನೆಗಳು ಪ್ರೀತಿ ಮತ್ತು ಲೈಂಗಿಕ ವಾಂಛೆಗಳು ಮೆದುಳಿನ ಬೇರೆ ಬೇರೆ ಜಾಲಗಳಿಂದ ಹುಟ್ಟಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದವು. ಈ ಅಧ್ಯಯನ ರೊಮ್ಯಾಂಟಿಕ್ ಲವ್ ಮತ್ತು ಲೈಂಗಿಕ ಬಯಕೆಯನ್ನು ಕಣ್ಣಿನ ನೋಟದಲ್ಲೇ ಪ್ರತ್ಯೇಕಿಸಬಲ್ಲ ಎರಡು ಪ್ರಯೋಗಳನ್ನು ಮುಂದಿಟ್ಟಿದೆ. ಜಿನೇವಾ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅವರು ಇದುವರೆಗೂ ಭೇಟಿ ಮಾಡದ ಕೆಲವೊಂದು ವ್ಯಕ್ತಿಗಳ ಚಿತ್ರಗಳನ್ನು ತೋರಿಸಲಾಯಿತು. ಮೊದಲ ಹಂತದಲ್ಲಿ ಜೋಡಿಯಾಗಿ ನಿಂತು ಮಾತನಾಡುತ್ತಿರುವ ಗಂಡು-ಹೆಣ್ಣಿನ ಚಿತ್ರಗಳನ್ನು ಅವರು ನೋಡಿದರೆ, ಎರಡನೇ ಹಂತದಲ್ಲಿ ಅನ್ಯ ಅಂಗೀಯ ವ್ಯಕ್ತಿಯ ಫೋಟೋವನ್ನು ನೀಡಲಾಯಿತು. ಅದರಲ್ಲಿ ಹುಡುಗ/ಹುಡುಗಿಯ ನೇರವಾಗಿ ನೋಡುಗನನ್ನು ನೋಡುವಂತಿತ್ತು, ಈ ಯಾವ ಭಾವಚಿತ್ರದಲ್ಲಿ ನಗ್ನತೆಯಾಗಲೀ, ಅಸಭ್ಯತೆಯಾಗಲೀ, ಉದ್ದೀಪಕ ಅಂಶಗಳಾಗಲೀ ಇರಲಿಲ್ಲ. ಎರಡೂ ಪ್ರಯೋಗಗಳ ಸಂದರ್ಭದಲ್ಲಿ ಅವರ ಮೆದುಳಿನ ಅಧ್ಯಯನವನ್ನು ನಡೆಸಲಾಯಿತು. ಜತೆಗೆ ಅವರು ಒಂದು ಭಾವ ಚಿತ್ರವನ್ನು ಯಾವ ಭಾಗದಲ್ಲಿ ಎಷ್ಟು ಹೊತ್ತು ನೋಡುತ್ತಾರೆ ಎನ್ನುವುದನ್ನು ಪ್ರತ್ಯೇಕ ಟ್ರಾಕಿಂಗ್ ಮೂಲಕ ಗಮನಿಸಲಾಯಿತು. ಕಣ್ಣುಗಳ ಟ್ರಾಕಿಂಗ್ ಮೂಲಕ ಗಮನಿಸಿದಾಗ ಯಾರು ಮುಖದ ಮೇಲೆ ಹೆಚ್ಚು ಕಾನ್ಸಂಟ್ರೇಟ್ ಮಾಡಿದ್ದರೋ ಅವರಲ್ಲಿ ರೊಮ್ಯಾಂಟಿಕ್ ಭಾವನೆಗಳು ಹೆಚ್ಚು ಮೂಡಿದ್ದು ಗೊತ್ತಾಯಿತು. ಅದೇ ದೇಹದ ಬೇರೆ ಬೇರೆ ಭಾಗಗಳ ಗಮನಿಸುತ್ತಾ ಹೋಗುತ್ತಿದ್ದಂತೆಯೇ ಕಾಮವಾಂಛೆ ಜಾಗೃತಗೊಂಡಿದ್ದು ಬಯಲಾಯಿತು.

ಇದು ಕೇವಲ ಗಂಡು ಮಕ್ಕಳಲ್ಲಿ ಕಂಡ ಭಾವನೆಯಲ್ಲ, ಹುಡುಗಿಯರಿಗೂ ಇಂತಹುದೇ ಭಾವನೆ ಒಡಮೂಡಿತ್ತು.....!
ಸಾಮಾಜಿಕವಾಗಿಯೂ ಮುಖವನ್ನೆ ನೋಡುತ್ತಿರುವಷ್ಟು ಹೊತ್ತು ಲೈಗಿಕ ಭಾವೆಗಳು ಹೆಚ್ಚು ಜಾಗೃತವಾಗಿರುವುದಿಲ್ಲ. ಅದೇ ದೇಹದ ನಾನಾ ಅಂಗಗಳ ಮೇಲೆ ದೃಷ್ಟಿ ಹಾಯಿಸುವ ಹೊತ್ತಿಗೆ ಬೇರೆ ಬೇರೆ ಭಾವನೆಗಳು ಮೂಡತ್ತವೆ.



Comments

Popular posts from this blog

ನೆನಪುಗಳ ಮಾತು ಮಧುರ...

ಅನುಕೂಲಕ್ಕೊಂದೆರಡು ಪ್ರೀತಿ..!-2

ಪ್ರತ್ಯಕ್ತೆ...