Posts

Showing posts from January 17, 2016

ಸೆಲ್ಫಿ ಮಹಾತ್ಮೆ

Image
ಸೆಲ್ಫಿ ಮಹಾತ್ಮೆ ರಾಬರ್ಟ್ ಕಾರ್ನೆಲಿಯಾಸ್‍ನ ಮೊದಲ ಸೆಲ್ಫಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನುಗಳು ಎಷ್ಟು ಜನಪ್ರಿಯ ಹೊಂದುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಮೊಬೈಲ್ ಉಪಯೋಗ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಊಟ-ತಿಂಡಿ ಇಲ್ಲದಿದ್ದರೂ ಪರವಾಗಿಲ್ಲ ಮೊಬೈಲ್ ಬೇಕೇ-ಬೇಕು. ರಾತ್ರಿ ಮಲಗುವ ಮುನ್ನ ದೇವರನ್ನು ನೋಡುತ್ತೇವೂ ಬಿಡುತ್ತೇವೂ ಮೊಬೈಲನ್ನು ಮಾತ್ರ ನೋಡೇ ನೋಡುತ್ತೇವೆ. ಕೈಯಲ್ಲಿ ಮೊಬೈಲ್ ಇಲ್ಲದಿದ್ದರೆ ಕೈ-ಕಾಲೇ ಆಡುವುದಿಲ್ಲ ಎನ್ನುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಮೊಬೈಲ್ ಎಂಬ ಈ ಉಪಕರಣವನ್ನು ಮೊದಲು ಪರಿಚಯಿಸಿದ್ದು 1940ರಲ್ಲೇ, ಆದರೂ ಮೂಲ ರೂಪಕ್ಕೆ ಬಂದದ್ದು 1980ರ ಅಸುಪಾಸಲ್ಲಿ. 2011ರಲ್ಲಿ ಯುನೈಟೆಡ್ ಕಿಂಗ್‍ಡಮ್ ಮೊಬೈಲ್ ಉಪಯೋಗದ ಬಗ್ಗೆ ನೆಡೆಸಿದ ಗಣತಿಯ ಪ್ರಕಾರ ಲ್ಯಾಂಡ್ ಲೈನ್ ಫೋನುಗಳಿಗಿಂತ ಹೆಚ್ಚು ಕರೆಗಳನ್ನು ಮಾಡಲಾಗುವುದು ಮೊಬೈಲ್ ಫೋನುಗಳಿಂದಲೇ. 1980ರಲ್ಲಿ ಆರಂಭವಾದ ಈ ಮೊಬೈಲ್ ಮೇನಿಯಾ ಮುಂದಕ್ಕೆ ಅದರಲ್ಲೇ ಒಂದು ಡಿಜಿಟಲ್ ಕ್ಯಾಮರ ಅಳವಡಿಸಿ ಫೋಟೋ ತೆಗೆಯುವ ಮಟ್ಟಕ್ಕೆ ಬೆಳೆಯಿತು. ಮೊದಲು ಕ್ಯಾಮರ ಸಹಿತ ಮೊಬೈಲ್ ಫೋನ್ ಮಾರಾಟವಾದದ್ದು 200ನೇ ಇಸವಿಯಲ್ಲಿ, ಅದು ಜಪಾನಿನಲ್ಲಿ. ಹೀಗೆ ಬೆಳೆದು ಬಂದ ಮೊಬೈಲ್, ಈಗ ಬಂದು ನಿಂತಿರುವುದು ಸೆಲ್ಫಿಯೆಂಬ ಫೋಟೋ ಮಾದರಿಯ ಒರೆಗೆ. ಸೆಲ್ಫಿಗಳನ್ನು ನಾವು ಹೆಚ್ಚು ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ನೋಡಿರುತ್ತೇವೆ. ಆದ್ದರಿಂದ ಸಿಲ್ಫಿ ಎಂ