ಪ್ರತ್ಯಕ್ತೆ...

ಪ್ರತ್ಯಕ್ತೆ

ಪ್ರೀತಿಸುವವರೆಲ್ಲ ಪ್ರೇಮಿಗಳಲ್ಲ, ಪ್ರೀತಿಸುವ ಕಲೆಯನ್ನು ತಿಳಿದವರು ನಿಜವಾದ ಪ್ರೇಮಿ..!


        ಅಂದು ಯಾಕೋ ಮನಸ್ಸು ಬೇರೇನನ್ನೂ ಬಯಸುತ್ತಿತ್ತು, ಒಂದು ಅತ್ಯದ್ಭುತ ಏಕಾಂತ ನನ್ನಲ್ಲೇ ಸೃಷ್ಟಿಯಾಗಿತ್ತು. ಯಾಕೋ ಅಂದು ಓದು ಬೇಡವಾಗಿತ್ತು, ಯಾರನ್ನು ಭೇಟಿಯಾಗಲು ಮನಸ್ಸಿಲ್ಲ, ಯಾರ ಮಾತು ಕೇಳಲು ತಾಳ್ಮೆಯಿಲ್ಲ, ಯಾರನ್ನು ಅರ್ಥ ಮಾಡಿಕೊಳ್ಳಲು ಇಷ್ಟವಿಲ್ಲ. ಯಾಕೋ ನನ್ನ ಏಕಾಂತದಲ್ಲಿ ಬೇರೆ ಏನೋ ಅಥವಾ ಯಾರೋ ಬೇಕು ಅನಿಸಿತ್ತು. ಆದರೆ ಯಾರನ್ನು ಕರೆಯೋದು? ಎಲ್ಲರೂ ಅವರದ್ದೇ ಓಟ ಓಡುತ್ತಿದ್ದಾರೆ, ಯಾರಿಗೂ ನಿಂತು ಬೇರೆಯಾರ ಕಷ್ಟ, ನಷ್ಟ, ಬೇಜಾರು ಕೇಳುವ ತಾಳ್ಮೆ , ಸಮಯ ಎರಡು ಇಲ್ಲ. ಹಾಗೂ ಕಷ್ಟಪಟ್ಟು ನಮ್ಮ ಮಾತುಗಳನ್ನ ಅವರಲ್ಲಿ ತುರುಕಿದರೆ ಅವರಿಗೆ ಅದೆಷ್ಟು ಅರ್ಥವಾಗುವುದೋ ಗೊತ್ತಿಲ್ಲ...! ಅರ್ಥವಾದಷ್ಟೆ ಸತ್ಯ...! ಅರ್ಥವಾಗದನ್ನು ಅವರೇ ಊಹಿಸಿ ಜಾತಕ ಬರೆಯೋರೆ ಹೆಚ್ಚು..! ಇದೆಲ್ಲಕ್ಕಿಂತ ಯಾರಿಗೂ ಅರ್ಥವಾಗದೇ ಉಳಿಯೋದೇ ಲೇಸು


  ಏಕಾಂತಕ್ಕೆ ಹಲವು ಸ್ಥಿತಿಗಳು. ಆದರೆ ಅಂದು ನನ್ನ ಏಕಾಂತ ಮಾರ್ಕ್ ಜೂಕರ್ ಬರ್ಗ್ ನನ್ನು ಆಯ್ದಿತ್ತು. ಬಹಳ ದಿನಗಳ ಬಳಿಕ ನನ್ನ ಫೇಸ್ಬುಕ್ ಖಾತೆ ನೋಡಬೇಕೆನಿಸಿ ಲಾಗಿನ್ ಮಾಡಿದೆ. ಎಷ್ಟೋ ದಿನದಿಂದ ನೋಡದೇ ಉಳಿದ ಹಾಯ್, ಹೆಲ್ಲೊ, ಗುಡ್ ಮಾರ್ನಿಗ್, ಗುಡ್ ನೈಟ್, ಡಿಯರ್, ಡಾರ್ಲಿಂಗ್ ಮೆಸೇಜುಗಳು...ನಾನು ಯಾರೆಂದು ತಿಲಿಯದೇ ಇರುವವರಿಗೆಲ್ಲ ನಾನು ಡಾರ್ಲಿಂಗ್…! ಬಹುಮೋತ್ತದ ಫ್ರೆಂಡ್ ರಿಕ್ವೆಸ್ಟುಗಳು, ಎಲ್ಲಾ ನೋಡಿರುವ ,ನೋಡಿರದ ಆಸಾಧಾರಣ, ಅವರಣೀಯ, ಅಸಹ್ಯ, ತರಿಸುವ ಮುಖಗಳು ಮತ್ತು ಭಂಗಿಗಳು, ಒಂದು ಹಿಡಿಸುವಂಥದ್ದಲ್ಲ, ಎಲ್ಲಾ ಬೂಟಾಟಿಕೆ, ತೋರಿಕೆ. ಅಷ್ಟೂ  ಫ್ರೆಂಡ್ ರಿಕ್ವೆಸ್ಟ್ ಗಳಲ್ಲಿ ನನ್ನ ಮನಸ್ಸು ಮುಟ್ಟಿದ್ದು  ಶೇಕ್ಸ್ಫಿಯರ್ ಮಾತ್ರ...! ಹೌದು ಅಂದು ನನಗೆ ಬಂದಿದ್ದ 75 ರಿಕ್ವೆಸ್ಟ್ ಗಳಲ್ಲಿ ನನಗೆ ತುಂಬ ಹಿಡಿಸಿದ ಪ್ರೊಪೈಲ್ ಆವನದ್ದೇ...


           ಹೆಸರು ಯಾರಿಗೂ ನಿಲುಕದ್ದು ಅದೇ "ಆಕಾಶ"…ಶೇಕ್ಸ್ಫಿಯರ್ ಪಟವನ್ನು ತನ್ನದೇ ಎಂಬಂತೆ, ರಾಜಾರೋಶವಾಗಿ ತನ್ನ ಪ್ರೊಫೈಲ್ ಗೆ ಹಾಕಿದ್ದ. ಇನ್ನು ಕವರ್ ಫೋಕೊ ಗೆ ಅದೇನೋ ತಲೆಯಲ್ಲಿ ನೂರರು ಚಕ್ರಗಳು, ಅವು ಬೇರೆಯವರನ್ನು ತಿರುಗಿಸುವಂತವು. ಇನ್ಟ್ರಸ್ಟಿಂಗ್ ಎನಿಸಿ ಪ್ರೊಫೈಲ್ ತೆಗ್ದು ನೋಡಿದ್ರೆ..ಖಾಲಿ…! ಆತನ ಊರು, ವಿಳಾಸ ಬಿಟ್ರೆ ಬೇರೆ ಏನು ಇರ್ಲಿಲ್ಲ, ಯಾಕೋ ಬೇಡ ಎನಿಸಿದ್ರು ಅಕ್ಸೆಪ್ಟ್ ಬಟನ್ ಒತ್ತಿದ್ದೆ...

          ಏಕಾಂಗಿಯಾಗಿ ಹೋರಡುವುದರಿಂದಲೇ ಯಾರಾದರು ಸಿಗುತ್ತಾರೆ ಎನ್ನುವ ಹಾಗೆ, ತಕ್ಷಣ ಶೇಕ್ಸ ಫಿಯರ್ ನನಗೆ ಹಾಯ್ ಹೇಳಿದ್ದ. ಹಕ್ಕಿಗಳ ಹಾಡು ಕೇಳುತ್ತಾ  ಸಂತೋಷ ಪಡುವ, ಅದು ಯಾವ ರಾಗದಲ್ಲಿ ಹಾಡುತ್ತಿದೆ ಎನ್ನುವುದನ್ನು ಹುಡುಕುವ ವಯಸ್ಸು,ಮನಸ್ಸು reply ಮಾಡಿತ್ತು.


                   ಹೀಗೆ ಬರೋಬ್ಬರೀ ಒಂದು ಘಂಟೆ ಮಾತುಕತೆ ನಡೆದ ಮೇಲೆ ನನಗೆ ತಿಳಿದದ್ದು. ಆತ ಫಿಲೋಸೊಫಿ ಮೇಷ್ರ್ಟು, ಅದು ನಮ್ಮ ರಾಜಧಾನಿಯಲ್ಲಿ, ಮೈಸೂರಿನಿಂದ ರಾಜಧಾನಿವರೆಗು ಪಯಣ, ಒಬ್ಬಂಟಿ, ಏಕಾಂತ ಇಷ್ಟ ಪಡುವವ, ಒಂದ್ ರೀತಿಲಿ ಅಂತರ್ಮುಖಿ ಆದರೆ ಪಾಠ ಹೇಳಲು ನಿಂತ್ರೆ ಯಾವ ಮರ ಕುಟಿಕಕ್ಕು ಕಡಿಮೆ ಇಲ್ಲ, ಬುದ್ಧಿಜೀವಿ, ಒಳ್ಳೇ ಅನುಭೂತಿ ಇರುವ, ಮೂಲಬೂತವಾದಿ ಹೀಗೆ ಹಲವು. ಇದೆಲ್ಲಕ್ಕಿಂತ ನನಗೆ ಇಷ್ಟವಾಗಿದ್ದು ಆತನ ಪ್ರೀತಿಯ ಮಾತುಗಳು,ಯಾವುದೇ ನಿರೀಕ್ಷೇ ಇಲ್ಲದ ಭಾವ, ಆತನ ಭಾಷೆ, ವ್ಯಕ್ತಿತ್ವ, ಜೀವನ ನೋಡುವ ರೀತಿ, ಬದುಕುವ ಶೈಲಿ, ಯಾವುದೇ ವಿಷಯವನ್ನು ಅರ್ಥೈಸುವ ವಿಧ, ತಾಳ್ಮೆ, ಹುಚ್ಚಾಟಗಲಿಲ್ಲದ ನಿಲುವು, ಆತ ನನಗೆ ಅಂತಾನೆ ಕಳಿಸುತ್ತಿದ್ದ ಹಾಡುಗಳು, ಹೀಗೆ ಹಲವು… 
         
ಯಾರನ್ನು ಮುಖತ: ಮಾತಾಡಿಸಿದ ನಾನು ಆತನಲ್ಲಿ ಕಳೆದೇ ಹೋಗಿದ್ದೆ, ಬರಿ ಪದಗಳಲ್ಲೇ ನೂರಾರು ದಿನದ ಪರಿಚಯ, ಸಲುಗೆ, ಆತನ ವ್ಯಕ್ತಿತ್ವ ನನ್ನ ಪಂಚೇಂದ್ರಿಯಗಳನ್ನು ಆಕರ್ಷಿಸಿತ್ತು.

       ಪಂಚೇಂದ್ರಿಯಗಳು ತಮ್ಮನ್ನು ಆಕರ್ಷಿಸುತ್ತಿರುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುತ್ತಾ ಪ್ರೇಮದ ಅನುಭವಕ್ಕೆ ಒಳಗಾಗುತ್ತದೆ.ಇದೇ ಹುಟ್ಟು ಸಾವಿನ ನಡುವೆ ಒಬ್ಬ ಮನುಷ್ಯನಿಗೆ ಪರಿಚಯವಾಗುವ ಸುಖ..!


       ಆತನ ವಿಷಯ ಪ್ರಜ್ಞೆಗೆ ಶುರುವಾದ ಒಲವು ಆತನಲ್ಲಿಗೂ ಹರಿದಿತ್ತು. ಆತ ನಿಜಕ್ಕು ಮಾತ್ರಿಂಕ, ಆತ ಒಬ್ಬ ಸೂಕ್ಷ್ಮ ಜೀವಿ, ಆತನಲ್ಲಿ ನನ್ನ ಎಲ್ಲಾ ಮಾತುಗಳನ್ನು ಜಾಗವಿತ್ತು, ನನ್ನ ಬಗ್ಗೆ ಕಾಳಜಿಯಿತ್ತು. ಆತ ನನ್ನನ್ನ ಜಡ್ಜ್ ಮಾಡದೆ, ನನ್ನೆಲ್ಲ ಸಮಸ್ಯೆಗಳಿಗೆ, ಗೊಂದಲಗಳಿಗೆ ಅವನಲ್ಲಿ ಉತ್ತರವಿತ್ತು. ಆತ ನನ್ನ ಎಲ್ಲಾ ಮತುಗಳ ಅರ್ಥವಾಗಿದ್ದಾ, ನನ್ನ ಎಲ್ಲಾ ಪದಕ್ಕೂ ಅರ್ಥಕೋಟ್ಟಿದ್ದ ಮತ್ತು ಅರ್ಥ ಹುಡುಕಿದ್ದ.

     ಜಗತ್ತು ಯಾವ ಉತ್ತರ ಕೋಟ್ಟಿದೆಯೋ ಪ್ರಶ್ನೆಯನ್ನು ಬಿಟ್ಟು, ನನಗೆ ಯಾವ ಉತ್ತರ ಬೇಕೋ ಅದಕ್ಕೆ ತಕ್ಕ ಪ್ರಶ್ನೆ ಆತನಿಂದ ಬಂದಿತ್ತು, ಆತ ನನ್ನ ಕನ್ನಡಿ, ಈಗಂತು ನನ್ನ ಬಿಡುವಿನ ವೇಳೆಯಲ್ಲಿ ಅವನದೇ…..


         ಆತ ನನ್ನಲಿ ಯಾವ ನಿರೀಕ್ಷೇ ಇಟ್ಟಿಲ್ಲವಂತೆ, ಆದ್ರೆ ಅವನಿಗೆ ನಾನಿಷ್ಟ....! ನನ್ನ ಜೊತೆ  ಮಾತಿಷ್ಟಾ, ನನ್ನ ನೋಡುವುದಿಷ್ಟ, ನನ್ನೋಂದಿಗೆ ಕಾಣುವ ಕನಸುಗಳಿಷ್ಟ. ಕೊನೆಗೆ ನನ್ನ ಅಹಂಕಾರವು ಇಷ್ಟ....! ಆತನ ಫೇಸ್ಬುಕ್ ಶಾಖೆ ನನಗಷ್ಟೇ ತೆರೆಯುತ್ತದೇ, ನಾನು ಆತನ "ಜಾನು"..! ಆತನ ಭಾವನೆಗಳಿಗೂ ನಾನೇ ಬೇಕು, ಇದೋಂತರ ವಿಸ್ಮಿತ ಅನುಭವ, ಬರಿ ಪದಗಳಲ್ಲೇ ಕಳೆದು ಹೋಗೋದು, ಪದಗಳಲ್ಲದೇ ಭಾವನೆಗಳನ್ನು ಬೇರೆ ಯಾವುದು ಸೂಕ್ಮವಾಗಿ ಹೇಳಬಲ್ಲದು ಅಲ್ವಾ....!


          ನಾನು ಆಕಾಶಕ್ಕೆ ಲಗೆಯಿಟ್ಟು ಇಂದಿಗೆ ಒಂದು ವಾರ ಬದುಕಿನ ಇಷ್ಟು ದಿನಗಳಲ್ಲಿ ನನ್ನ ಅತಿ ಹೆಚ್ಚು ಭಾವನೆಗಳನ್ನು, ಪದಗಳನ್ನು ದೋಚ್ಚಿದ್ದು ಆತನೇ.
        ಅವನ ಜೊತೆ ಇದ್ದಾಗ ಏನೋ ಒಂದು ಪರಿಪೂರ್ಣ ಪ್ರಜ್ಞೆ, ಸುಂದರ ಸಂತೋಷ. ಇದನ್ನು ಯಾರಿಗೇ ಹೇಳಿದ್ರು ನಿಖರವಾಗಿ ಅರ್ಥವಾಗಲ್ಲ. ಅವರಿಗೆಲ್ಲ ಇದೋಂದು ಸಮಯ ನೂಕುವ ಪ್ರಯತ್ನ ಅಷ್ಟೇ. ಯಾವತ್ತು  ತಣ್ಣೀರು ಸ್ನಾನ ಮಾಡದೇ ಇದ್ದವರಿಗೆ ತಣ್ಣರು ಸ್ನಾನ ಅನ್ನೋದು ಕೇವಲ ಒಳ್ಳೆಯದು ಅಥವಾ ಕೆಟ್ಟದ್ದು  ಮಾಡಬೇಕಾದ್ದು ಅಥವಾ ಮಾಡಬಾರದ್ದು . ಅನಿಭವವೂ ಹಾಗೆ, ಒಂದು ಬೆಳಕಂತೆ,  ಅದು ಹಿಂದುಗಡೆಯಿಂದ ಬಿದ್ದಾಗ ದಾರಿ ತೋರುತ್ತದೆ, ಅದೇ ಮುಂದುಗಡೆಯಿಂದ ಬಿದ್ದಾಗ ದಾರಿ ತಪ್ಪಿಸುತ್ತದೆ. ಇದನ್ನು ತೀರ ಕೆಣಕದೆ, ಕಾಯದೆ, ಯಾವುದೇ ನೀರೀಕ್ಷೆಯಿಲ್ಲದೆ ಅದರ ಸಂತೋಷವನ್ನು, ಆತನ ಬೆಚ್ಚಗಿನ ಮಾತನ್ನು, ಕ್ಷಣಕ್ಕೆ ಮಾತ್ರ ಅನುಭವಿಸಬೇಕು. ಯಾವುದೇ ಸಂಪರ್ಕಯಿಲ್ಲದೆ ಬರಿ ಪದಗಳಲ್ಲೆ ಕಳೆದು ಹೋಗೋ ಸಂಭಂಧಕ್ಕೆ ಏನೆಂದು ಹೆಸರುಕೊಡೋಣಾ...? ನಾವು ಏನೇ ಹೆಸರು ಕೊಟ್ರು ಆಯಾ ವಸ್ತು ಅಥವಾ ಭಾವನೆ ತನ್ನ ಗಳಿಕೆಯನ್ನು ಗಳಿಸಿಯೇ ತೀರುತ್ತದೆ.

           ಜಗತ್ತಿನ ಕಣ್ಣಿಗೆ ಕಾಣಿಸುವುದು, ಕಾಣಿಸದೇ ಇರುವುದು ಪ್ರೀತಿಯ ಪ್ರತಿರೂಪಗಳೇ. ಯಾವುದೇ ನಿರೀಕ್ಷೆಗಳಿಲ್ಲದ ಭಾವನೇಯೇ ಪ್ರೀತಿಯಾದರೆ....ಅವನಲ್ಲಿ ನನಗೆ, ನನಲ್ಲಿ ಅವನಿಗೆ ಇರೋದು ಪ್ರೀತಿಯಲ್ಲದೇ ಮತ್ತೇನು…?
          ಇದೇ ಯೋಚನೆಯಲ್ಲಿ ಅವನಲ್ಲಿ ನಾನು ಮಾತಾಗಿ ಒಂದು ತಿಂಗಳು ಮತ್ತಷ್ಟು ಪದಗಳು ಮತ್ತಷ್ಟು ಮಾತು, ಮತ್ತಷ್ಟು ಕನಸು...! ಮತ್ತಷ್ಟು ಭಿಖರಿಯಾಗುವ ಭಾವನೆಗಳು..!!!






Comments

Popular posts from this blog

ಅನುಕೂಲಕ್ಕೊಂದೆರಡು ಪ್ರೀತಿ..!-2

Love at first sight...