ಸೆಲ್ಫಿ ಮಹಾತ್ಮೆ

ಸೆಲ್ಫಿ ಮಹಾತ್ಮೆ


ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನುಗಳು ಎಷ್ಟು ಜನಪ್ರಿಯ ಹೊಂದುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಮೊಬೈಲ್ ಉಪಯೋಗ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಊಟ-ತಿಂಡಿ ಇಲ್ಲದಿದ್ದರೂ ಪರವಾಗಿಲ್ಲ ಮೊಬೈಲ್ ಬೇಕೇ-ಬೇಕು. ರಾತ್ರಿ ಮಲಗುವ ಮುನ್ನ ದೇವರನ್ನು ನೋಡುತ್ತೇವೂ ಬಿಡುತ್ತೇವೂ ಮೊಬೈಲನ್ನು ಮಾತ್ರ ನೋಡೇ ನೋಡುತ್ತೇವೆ. ಕೈಯಲ್ಲಿ ಮೊಬೈಲ್ ಇಲ್ಲದಿದ್ದರೆ ಕೈ-ಕಾಲೇ ಆಡುವುದಿಲ್ಲ ಎನ್ನುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ.
ಮೊಬೈಲ್ ಎಂಬ ಈ ಉಪಕರಣವನ್ನು ಮೊದಲು ಪರಿಚಯಿಸಿದ್ದು 1940ರಲ್ಲೇ, ಆದರೂ ಮೂಲ ರೂಪಕ್ಕೆ ಬಂದದ್ದು 1980ರ ಅಸುಪಾಸಲ್ಲಿ. 2011ರಲ್ಲಿ ಯುನೈಟೆಡ್ ಕಿಂಗ್‍ಡಮ್ ಮೊಬೈಲ್ ಉಪಯೋಗದ ಬಗ್ಗೆ ನೆಡೆಸಿದ ಗಣತಿಯ ಪ್ರಕಾರ ಲ್ಯಾಂಡ್ ಲೈನ್ ಫೋನುಗಳಿಗಿಂತ ಹೆಚ್ಚು ಕರೆಗಳನ್ನು ಮಾಡಲಾಗುವುದು ಮೊಬೈಲ್ ಫೋನುಗಳಿಂದಲೇ.
1980ರಲ್ಲಿ ಆರಂಭವಾದ ಈ ಮೊಬೈಲ್ ಮೇನಿಯಾ ಮುಂದಕ್ಕೆ ಅದರಲ್ಲೇ ಒಂದು ಡಿಜಿಟಲ್ ಕ್ಯಾಮರ ಅಳವಡಿಸಿ ಫೋಟೋ ತೆಗೆಯುವ ಮಟ್ಟಕ್ಕೆ ಬೆಳೆಯಿತು. ಮೊದಲು ಕ್ಯಾಮರ ಸಹಿತ ಮೊಬೈಲ್ ಫೋನ್ ಮಾರಾಟವಾದದ್ದು 200ನೇ ಇಸವಿಯಲ್ಲಿ, ಅದು ಜಪಾನಿನಲ್ಲಿ.
ಹೀಗೆ ಬೆಳೆದು ಬಂದ ಮೊಬೈಲ್, ಈಗ ಬಂದು ನಿಂತಿರುವುದು ಸೆಲ್ಫಿಯೆಂಬ ಫೋಟೋ ಮಾದರಿಯ ಒರೆಗೆ. ಸೆಲ್ಫಿಗಳನ್ನು ನಾವು ಹೆಚ್ಚು ಫೇಸ್‍ಬುಕ್, ಟ್ವಿಟರ್‍ಗಳಲ್ಲಿ ನೋಡಿರುತ್ತೇವೆ. ಆದ್ದರಿಂದ ಸಿಲ್ಫಿ ಎಂಬ ಪದ ಎಲ್ಲರಿಗೂ ಚಿರಪರಿಚಿತ. ಈಗಿನ ಕಲೇಜು ಹುಡುಗ-ಹುಡುಗುಯರಂತು ಸೆಲ್ಫಿ ಪ್ರಿಯರಾಗಿಬಿಟ್ಟಿದ್ದಾರೆ. ಇಷ್ಟು ಜನಪ್ರಿಯವಾದ ಈ ಸಿಲ್ಫಿಯೆಂಬ ಫೋೀಟೋ ಮಾದರಿಯ ಬಗ್ಗೆ ಕಿರು ಮಾಹಿತಿ ಇಲ್ಲಿದೆ.
ಸೆಲ್ಫಿಯ ಹುಟ್ಟು: ಸೆಲ್ಫಿ ಅಥವಾ ಸ್ವಯಂ ಕ್ಲಿಕ್ಕಿಸಿಕೊಳ್ಳುವ ಫೋಟೋ! ಇದು ನಾವು ನೀವು ತಿಳಿದಿರುವಂತೆ ಹೊಸತೇನಲ್ಲ, ಇದಕ್ಕೆ ಬರೋಬ್ಬರಿ 175 ವರ್ಷಗಳ ಇತಿಹಾಸವಿದೆ. ಅಮೆರಿಕದ ಹವ್ಯಾಸಿ ಫೋಟೊಗ್ರಾಫರ್ ಸೆಲ್ಫಿಯ ಬ್ರಹ್ಮ ಎಂದೇ ನಂಬಲಾಗುತ್ತಿದೆ. 1839ರಲ್ಲಿ ಫಿಲಡೆಲ್ಫಿಯಾದ 30ರ ಹರೆಯದ “ರಾಬರ್ಟ್ ಕಾರ್ನೆಲಿಯಾಸ್” ಅವರು, ತಮ್ಮದೇ ಅಂಗಡಿಯಲ್ಲಿ ಮೊದಲು ಸೆಲ್ಫಿ ತೆಗೆದುಕೊಂಡ ವ್ಯಕ್ತಿ. ಆದರೆ ಅಂದಿಗೆ ಅದು ವಿಶೇಷವಾದ ಫೋಟೋ ಎನಿಸಿಕೊಳ್ಳಲಿಲ್ಲ, ಕಾರಣ ಆ ಹೊಸ ಬಗೆಯ ಟ್ರಂಡ್ ಶುರುವಾಗಲು ನಾವು ಒಂದಿವರೆ ಶತಮಾನ ಕಾಯಬೇಕಿತ್ತು.
ಆಗ ಸೆಲ್ಫಿ ತೆಗೆಯಲು ಅನುಕೂಲಗಳಿರಲಿಲ್ಲ, ಡಿಜಿಟಲ್ ಕ್ಯಾಮರಗಳಂತು ದೊರದ ಮಾತು. ಅದಕ್ಕಾಗಿ ಕಾರ್ನೆಲಿಯಾಸ್ ಒಂದು ಟ್ರಕ್ ಮಾಡಿದ್ದರು. ಫೋಟೊವನ್ನು ಸ್ವಯಂ ಕ್ಲಕ್ಕಿಸಿಕೊಳ್ಳುವ ಸಲುವಾಗಿ ಫೋಟೊ ಫ್ರೇಮ್‍ನೊಳಗೆ ಒಂದು ಐದು ನಿಮಿಷದ ನಂತರ ಲೆನ್ಸ್‍ನ ಮುಚ್ಚಳವನ್ನು ತೆಗೆದಿದ್ದರು. ಈ ಚಿತ್ರದ ಹಿಂದೆ “ ದಿ ಫಸ್ಟ್ ಪಿಕ್ಚರ್ ಎವರ್ ಟೇಕನ್ 1839” ಎಂದು ಬರೆದಿಟ್ಟರು.
ಸೆಲ್ಫಿ ಎಂಬ ಪದ ಬಂದಿದ್ದು: ಸೆಲ್ಫಿ ಎಂಬ ಪದವನ್ನು ಮೊದಲು ಗುರುತಿಸಿದ್ದು 2002ರಲ್ಲಿ, ಅದು ಆಸ್ಟ್ರೇಲಿಯಾದ ಒಂದು ಇಂಟರ್ನೆಟ್ ಜಾಲದಲ್ಲಿ (ಅಬಿಸಿ ) ಹಾಗೆ ಈ ಪದವನ್ನು ಸ್ವಯಂ ಕ್ಲಿಕ್ಕಿಸಿದ ಫೋಟೊಗಳಿಗೆ ಅನ್ವಯವಾಗುವಂತೆ, ಬಳಸಿದ್ದು 2005ರಲ್ಲಿ. ಅದು ಕ್ರೌಸ್ ಎಂಬ ಪ್ರಖ್ಯಾತ ಫೋಟೊಗ್ರಾಫರ್‍ನಿಂದ. ಹೀಗೆ 1839ರಲ್ಲೇ ಸೃಷ್ಟಿಯಾದ  ಸೆಲ್ಫಿ ಈಗ ಪ್ರಖ್ಯಾತ ಹೊಂದಿದೆ.
1900ರಲ್ಲಿ ಕೊಡೆಕ್ ಬ್ರೌನ್ ಬಾಕ್ಸ್ ಕ್ಯಾಮರ ಸ್ವಯಂ ಚಾಲಿತಾ ಫೋಟೊಗಳನ್ನು ತೆಗೆಯಲು ಉಪಯೋಗವಾಗುತಿತ್ತು. ಈ ವಿಧಾನದಲ್ಲಿ ಒಬ್ಬ ವ್ಯಕ್ತಿ ಕನ್ನಡಿಯ ಮುಂದೆ ನಿಂತು ಕ್ಯಾಮರವನ್ನು ಹತ್ತಿರವಿರುವ ಖುರ್ಚಿ ಅಥವಾ ಮೇಜಿನ ಮೇಲಿರಿಸಿ ಫೋಟೊವನ್ನು ತೆಗೆಯಬಹುದು.

 1914 ಮೊದಲು 13 ವರುಷದ ಅನಸ್ರೇಸಿಯಾ ನಿಕೋಲ್ವೆನಾ ಎಂಬ ಹುಡುಗಿ ತನ್ನ ಗೆಳೆಯನಿಗೆ ಕಳುಹಿಸುವುದಕ್ಕೊಸ್ಕರ ಈ ತಂತ್ರಜ್ಞಾನವನ್ನು ಬಳಸಿ ಮೊದಲು ಫೋಟೊ ಒಂದನ್ನು ತೆಗೆಸಿಕೊಂಡಳು. ಹೀಗೆ ಯಾವುದೋ ಕಾಲದಲ್ಲಿ ಶುರುವಾದ ಸೆಲ್ಫಿ ಈಗ ಒಂದು ಟ್ರೆಂಡ್ ಆಗಿದೆ.




Comments

Popular posts from this blog

ನೆನಪುಗಳ ಮಾತು ಮಧುರ...

ಅನುಕೂಲಕ್ಕೊಂದೆರಡು ಪ್ರೀತಿ..!-2

ಪ್ರತ್ಯಕ್ತೆ...