Posts

ಯುವ ಪೀಳಿಗೆ ಮತ್ತು ಗಾಂಧಿ

Image
 ಯುವ ಪೀಳಿಗೆ ಮತ್ತು ಗಾಂಧಿ ಮೊನ್ನೆ ನಾನು ಫೇಸ್‍ಬುಕ್ ನೊಡುವಾಗ ಗಾಂಧೀಜಿಯವರ ಬಗ್ಗೆ ಒಂದು ಪೋಸ್ಟ್ ನೋಡ್ದೆ, ಅದರ ಪ್ರಕಾರ “ಗಾಂಧಿ ಒಬ್ಬ ವಿಕೃತ ಕಾಮಿ, ದುರಾಳ ಮನಸಿನ ವ್ಯಕ್ತಿ” ಅದನ್ನ ನೋಡಿ ಒಂದು ಕ್ಷಣ ನನ್ನ ಧಮನಿ ನಿಂತ ಅನುಭವ!!! ಮೊದಲಿನಿಂದಲೂ ಗಾಂಧೀಜಿಯವರ ಕಟ್ಟ ಅಭಿಮಾನಿ ನಾನು, ಅವರ ಅಘಾದವಾದ ವ್ಯಕ್ತಿತ್ವದಲ್ಲಿ ಒಂದು ಸೂಜಿಯಶ್ಟಾದರು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಆಸೆ ನನದು. ಹೀಗಿರುವಾಗ ಇಂಥ ಒಂದು ಪೋಸ್ಟ್ ನೋಡಿ ಇದರ ಬಗ್ಗೆ ನನ್ನ ಸ್ನೇಹಿತರನ್ನು ಕೇಳ ಹೊದ್ರೆ ಅವರದು ಅಷ್ಟೇ ನಿಷ್ಟೋರವಾದ ಉತ್ತರ! ಅವರ ಪ್ರಕಾರ ನಮ್ಮ ದೇಶದ ಈಗಿನ ಸ್ಥಿತಿಗೆ ಗಾಂಧೀಜಿಯವರೇ ಕಾರಣ!!  ಈಗಿನ ಯುವ ಪೀಳಿಗೆ ಸೊಷಿಯಲ್ ಮೀಡಿಯದಲ್ಲಿ ಯಾರದ್ದಾದರು ಬಗ್ಗೆ ಪೋಸ್ಟ್ ಮಾಡುವ ಮೊದಲು  ಅದು ನಿಜವೂ ಸುಳ್ಳೂ ಎಂದು ಕಿಂಚಿತ್ತು ಯೋಚಿಸದೇ ಪೋಸ್ಟ್ ಬಟನ್ ಒತ್ತಿಬಿಡಿತ್ತಾರೆ. ನಾನು ಯಾರ ಯೋಚನಾ ಶಕ್ತಿಯನ್ನು ಇಲ್ಲಿ ಪ್ರಶ್ನಿಸುತ್ತಿಲ್ಲ, ನನ್ನ ಕಳಕಳಿಯ ಮನವಿ ಏನೆಂದರೆ ನೀವು ತಪ್ಪಾಗಿ ಪ್ರಚಾರ ಮಾಡುತ್ತಿರುವುದು ನಮ್ಮ “ಮಹಾತ್ಮ”ನ ಮೇಲೆ ಎಂಬುದು ನೆನಪಿರಲಿ. ಜನರಲ್ಲಿ ನಾನು ಸಂವಹಿಸುವಾಗ ಅವರು ಗಾಂಧಿಯನ್ನು ದ್ವೇಷಿಸಲು ಕೆಲವು ಕಾರಣಗಳು ತಿಳಿದವು. ಅದಕ್ಕೆ ನನಗೆ ತಿಳಿದ ಉತ್ತರಗಳನ್ನು ನಿಮ್ಮ ಮುಂದಿಡುವ ಒಂದು ಪ್ರಾಮಾಣಿಕ ಪ್ರಯತ್ನ ಇದು. ದೇಶದ ಇಬ್ಬಾಗ ಮತ್ತು ಗಾಂಧಿ:  ನಮ್ಮ ಯುವ ಪೀಳಿಗೆಯು ಗಾಂಧಿಯನ್ನು ದ್...

ನೆನಪುಗಳ ಮಾತು ಮಧುರ...

Image
                                      ನೆನಪುಗಳ ಮಾತು ಮಧುರ... ನೆನಪುಗಳೇ ಹಾಗೆ ಯಾವಾಗ ಬೇಕೆಂದರಲ್ಲಿ ತನ್ನ ಬುತ್ತಿ ಬಿಚ್ಚಿ ಕೂತುಬಿಡುತ್ತವೆ. ಅದಕ್ಕೆ ಯಾರ ಅಪ್ಪಣೆ ನಿರಾಕರಣೆಗಳ ಹಂಗಿಲ್ಲ. ಅದರಲ್ಲಿ ಕೆಲವು ನೆನಪುಗಳು ಖುಷಿ ಕೊಡುವುದಾದರೆ, ಕೆಲವು ನೋವು-ಹಿಂಸೆಯನ್ನು, ಇನ್ನೂ ಕೆಲವು ನಮ್ಮ ಮನಸ್ಸಿನಾಳದಲ್ಲಿ ಇತ್ತ ಸಂತೋಷದ ನೆನಪು ಆಗದೆ, ದುಃಖದ ನೆನಪು ಆಗದೆ ದ್ವಂದ್ವಾವಸ್ಥೆಯಲ್ಲೇ ಉಳಿದುಬಿಡುತ್ತವೆ. ಆ ನೆನಪುಗಳನ್ನು ಬಿಸಿತುಪ್ಪದಂತೆ ಮರೆಯುವುದು ಕಷ್ಟ ನೆನಸಿಕೊಂಡರಂತು ಇನ್ನು ಕಷ್ಟ. ಇದರಿಂದ ಮನಸ್ಸು ಒಂದು ಹುಚ್ಚು ಮನಸ್ಥಿಗೆ ಜಾರುವುದಂತು ಕಚಿತ. ಕೆಲವು ನೆನಪುಗಳನ್ನು ಯಾರೊಟ್ಟಿಗೂ ಹಂಚಿಕೊಳ್ಳಲಾಗದೆ ಇತ್ತ ಅನುಭವಿಸಲು ಆಗದೆ ಪರದಾಡುವ ಸ್ಥಿತಿ ಯಾವ ಶತ್ರುಗಳಿಗೂ ಬೇಡ. ಹಾಗೆ ಎಲ್ಲರ ಬದುಕಲ್ಲೂ ಇಂತಹ ನೆನಪು ಇದ್ದೇ ಇರುತ್ತದೆ, ಅವು ನಮ್ಮ ಬದುಕಿನಲ್ಲಿ ಯಾರು ಉತ್ತರಿಸಲಾಗದ ಪ್ರಶ್ನೆಗಳನ್ನು ಗೊಂದಲಗಳನ್ನು ಸೃಷ್ಟಿಸಿರುತ್ತವೆ. ಅದೇ ರೀತಿ ಎಲ್ಲರ ಜೀವನದಲ್ಲೂ ಒಂದು ಹೆಸರಿಡದ ಸಂಭದ ಇರುತ್ತದೆ. ಈ ರೀತಿ ನನ್ನ ಕಾಡಿದ, ಕಾಡುತ್ತಿರುವ ಒಂದು ನೆನಪು ಇಲ್ಲಿದೆ... ನಿಮಗೆ ಉತ್ತರ ಸಿಕ್ಕರೆ ನನಗೆ...